ಚಿತ್ರ ವಿಮರ್ಶೆ : ತಾರಕ್ | ನಮ್ಮ ರೇಟಿಂಗ್ - 4/5

by September 29, 2017 0 comments
ವಿಮರ್ಶಕ : ಸಾಗರ್ ಪಡಿವಾಳ್.

ಫಿಲ್ಮಿಬೀ ರೇಟಿಂಗ್ : 4/5

ಮೊದಲನೆಯದಾಗಿ ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

"ತಾರಕ್" ಚಿತ್ರದ ಮೂಲಕ ಬಾಕ್ಸ್ ಆಫೀಸ್ ಚಕ್ರವರ್ತಿ ದರ್ಶನ್ ರವರು ತಮ್ಮ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಹಬ್ಬಕ್ಕೆ ಅದ್ಭುತವಾದ ಉಡುಗೊರೆ ನೀಡಿದ್ದಾರೆ.

ಹೇಗಿದೆ ಚಿತ್ರ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್...

‍‌‌ಸಿನಮಾ ಅಂದ್ರೆ ಮೊದ್ಲ್ನೆದಾಗಿ ನೆನಪಿಗೆ ಬರೋದೆ ಹೀರೊ ಬಿಲ್ಡಪ್ಸ್ , ಇಂಟ್ರೊಡಕ್ಷನ್ ಸಾಂಗ್, ಫೈಟ್ಸ್ , ಕೌಂಟರ್ ಡೈಲಾಗ್ಸ್, ಅವಗವಾಗ ಬರೋ ಹೀರೋಯಿನ್ಸ್, ಕೆಲವೊಮ್ಮೆ ಅಬ್ಬರಿಸುವ ವಿಲನ್ಸ್. ಆದ್ರೆ, 'ತಾರಕ್' ಚಿತ್ರ ಇದ್ಕೆಲ್ಲಾ ತದ್ವಿರುದ್ದವಾಗಿದೆ ಅಂದ್ರು ತಪ್ಪಾಗಲ್ಲ.

'ತಾರಕ್' ನಿರ್ದೇಶಕ ಪ್ರಕಾಶ್ ಅವರು ತಮ್ಮ ಹಿಂದಿನ ಸಿನಿಮಾಗಳಂತೆ ಕಥೆಗೆ ಪ್ರಾಮುಖ್ಯತೆ ನೀಡಿದ್ದು, ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. 'ರಿಷಿ', 'ಖುಷಿ' ಮತ್ತು 'ಮಿಲನ' ರೀತಿಯಲ್ಲೇ 'ತಾರಕ್' ಕೂಡ ಮೂಡಿಬಂದಿದೆ ಎಂದರೆ ತಪ್ಪಾಗಲಾರದು.

ಇದೊಂದು ಕಾರಣಾಂತರಗಳಿಂದ ದೂರವಾದ ತಾತ - ಮೊಮ್ಮಗನ ಕಥೆ. ವಿದೇಶದಲ್ಲಿರುವ ಮೊಮ್ಮಗನ ಆಗಮನಕ್ಕಾಗಿ ಹಂಬಲಿಸುತ್ತಿರುವ ತಾತನ ಭಾವನಾತ್ಮಕ ಕಥೆ. ತಾತ - ಮೊಮ್ಮಗನ ಪ್ರೀತಿಯೊಂದಿಗೆ, ಸುಂದರವಾದ ಪ್ರೇಮಕಥೆ ಕೂಡ ಇದೆ. ಸಂಬಂಧಗಳ ಮೌಲ್ಯವಿದೆ. ತಾತ - ಮೊಮ್ಮಗ ಏಕೆ ದೂರವಾಗುತ್ತಾರೆ?? ಮತ್ತೆ ಒಂದಾಗುತ್ತಾರಾ?? ಹೌದು ಎಂದಾದರೆ ಹೇಗೆ?? ಎಂಬುವುದೇ ಚಿತ್ರದ ಜೀವಾಳ.

ದರ್ಶನ್ ತಮ್ಮ ಕಮರ್ಷ್ಯಲ್ಲ್ ಚತ್ರಗಳಿಂದ ಹೊರಬಂದು 'ತಾರಕ್' ಸಿನಿಮಾ ಮಾಡಿದ್ದಾರೆ. ಇದೊಂದು ಪಕ್ಕ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಇದರಿಂದ ದರ್ಶನ್ ಅವರ ಸಿನಿಮಾಗಿದ್ದ ಇಮೇಜ್ ಬದಲಾದರೂ ಅಚ್ಚರಿಪಡುವಂತ್ತಿಲ್ಲ.

ಹೀಗೇಂದಾಕ್ಶಣ ಮಾಸ್ ಆಡಿಯನ್ಸ್ ಬೇಜಾರು ಪಡ್ಬೇಕಾಗೇ ಇಲ್ಲ. ಯಾಕೆ ಅಂದ್ರೆ ತಾರಕ್ ಚಿತ್ರದಲ್ಲಿ ಮಾಸ್ ಎಲಿಮೆಂಟ್ಸ್ ಕೂಡ ಇದೆ. ದರ್ಶನ್ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವಂತಹ ಮೂರು ಭರ್ಜರಿ ಫೈಟ್ ಗಳನ್ನು ಮಾಡಿದ್ದರೆ. ಅವರ ಮೈಕಟ್ಟಿಗೆ ತಕ್ಕಂತಹ ಪಂಚಿಂಗ್ ಡೈಲಾಗ್ಸ್ ಕೂಡ ಇದೆ. ಆದ್ರೆ ಅವುಗಳಾವುದು ಬಿಲ್ಡಪ್ ಎಂದೆನಿಸಲ್ಲ.

ಈ ಚತ್ರದಲ್ಲಿ ವಿಷೇಶವೇನೆಂದರೆ ದರ್ಶನ್ ಕಂಪ್ಲೀಟ್ ಬದಲಾಗಿದ್ದಾರೆ. ಒಬ್ಬ ಜವಾಬ್ದಾರಿಯುತ ಯುವಕನಾಗಿ, ಒಬ್ಬ ಯಶಸ್ವಿ ಬಿಸ್ನೆಸ್ ಮ್ಯಾನ್ ಆಗಿ ಹಾಗು ಒಬ್ಬ ಲವರ್ ಬಾಯ್ ಆಗಿ ನಟಿಸಿದ್ದಾರೆ.
  
ಇನ್ನು ಸಹ ನಟರ ಬಗ್ಗೆ ಹೇಳುವುದಾದರೆ, ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ದೇವರಾಜ್ ರವರು ತಾತನ ಪಾತ್ರದಲ್ಲಿ ಮನ ಕಲಕುವಂತಹ ರೀತಿಯಲ್ಲಿ ಅಭಿನಯಿಸಿದ್ದಾರೆ.
  
ತಮಗೆಲ್ಲರಿಗು ತಿಳಿದಿರುವಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಶಾನ್ವಿ ಶ್ರೀವಸ್ತವ್ ಕೂಡ ಒಬ್ಬರು. ಇತರೆ ಚಿತ್ರಗಳಂತೆ ನಾಯಕಿಯು ಹೀಗೆ ಬಂದು ಹಾಗೆ ಹೋಗುವ ಪಾತ್ರವಂತೂ ಅಲ್ಲ. ಮುದ್ದಾಗಿ ಕಾಣಿಸಿಕೊಂಡಿರುವ ಶಾನ್ವಿ ಅವರ ನಟನೆ ಸಿಕ್ಕಾಪಟ್ಟೆ ಇಷ್ಟವಾಗ್ತಾರೆ. ಇವರಿಂದಾನೆ ಕಥೆಯು ತಿರುವು ಪಡೆದುಕೊಳ್ಳುತ್ತದೆ.
  
ಚಿತ್ರದ ಇನ್ನೊಂದು ನಾಯಕಿ ಶ್ರುತಿ ಹರಿಹರನ್. ಅಪ್ಪಟ ಭಾರತೀಯ ಸಂಪ್ರದಾಯಸ್ಥ ಯುವತಿ ಪಾತ್ರ ನಿರ್ವಹಿಸಿರುವ ಶ್ರುತಿ, ತಮ್ಮ ನೈಜ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ದರ್ಶನ್ ಅವರಿಗೆ ಉತ್ತಮ ಸಾಥ್ ನೀಡುವ ಮೂಲಕ ತೆರೆಮೇಲೆ ಮಿಂಚಿದ್ದಾರೆ.

ಕುರಿ ಪ್ರತಾಪ್ ಮತ್ತು 'ಡ್ರಾಮಾ ಜ್ಯೂನಿಯರ್ಸ್' ಖ್ಯಾತಿಯ ಮಹೇಂದ್ರ ರವರ ಹಾಸ್ಯಚಟಾಕಿಯು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
  
ಉಳಿದಂತೆ ಅವಿನಾಶ್, ರಾಜೇಶ್ ನಟರಂಗ, ಜೈ ಜಗದೀಶ್, ಸುಮಿತ್ರ, ಶರತ್ ಲೋಹಿತಾಶ್ವ ಅವರು ಪೋಷಕ ಕಲಾವಿದರಾಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ನ್ಯಾಯವದಗಿಸಿದ್ದಾರೆ.

ಅರ್ಜುನ್ ಜನ್ಯ ಅವರ ಕಂಪೋಸಿಂಗ್ ವಿಭಿನ್ನವಾಗಿದ್ದು ನಾಯಕ ನಾಯಕಿಯ ಕೆಮೀಷ್ಟ್ರಿಗೆ ಇನ್ನಷ್ಟು ಸೊಬಗು ನೀಡಿದ್ದಾರೆ.. ಹಾಡುಗಳನ್ನು ಬಹುತೇಕ ವಿದೇಶದಲ್ಲಿ ಚಿತ್ರೀಕರಿಸಲಾಗಿದೆ. ಕೃಷ್ಣ ಕುಮಾರ್ ಅವರ ಕ್ಯಾಮೆರಾ ವರ್ಕ್ ತಾರಕ್ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
 
'ತಾರಕ್' ಸಿನಿಮಾದ ಫಸ್ಟ್ ಹಾಫ್ ನಲ್ಲಿ ಲವ್ ಸ್ಟೋರಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಚಿತ್ರ ನಿಧಾನಗತಿಯಲ್ಲಿ ಸಾಗುತ್ತದೆ. ಆರಂಭದಲ್ಲೇ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತೆ. ನಂತರ ಚಿತ್ರ ತಿರುವು ಪಡೆದುಕೊಂಡು ಸೆಕೆಂಡ್ ಹಾಫ್ ನಲ್ಲಿ ಸಿನಿಮಾ ಪ್ರದಾನವೆನಿಸುತ್ತೆ. ಕುತೂಹಲ ಕಾಪಾಡಿಕೊಳ್ಳುತ್ತಾ,  ಅಲ್ಲಲ್ಲಿ ಟ್ವಿಸ್ಟ್ ಗಳನ್ನು ನೀಡಿ ಪ್ರೇಕ್ಷಕರನ್ನು ಕ್ಲೈಮ್ಯಾಕ್ಸ್ ವರೆಗೂ ಹಿಡಿದಿಡುವಲ್ಲಿ ನಿರ್ದೇಶಕು ಯಶಸ್ಸ್ವಿಯಾಗಿದ್ದಾರೆ.

ಒಂದಂತೂ ನಿಜ! ದರ್ಶನ್ ಎಂದಾಕ್ಷಣ ಕೇವಲ ಮಾಸ್ ಆಡಿಯನ್ಸ್ ಮೆಚ್ಚುವಂತಹ ಸಿನಿಮಾ ಮಾಡುತ್ತಾರೆ ಎಂಬ ಮಾತೆಗೆ ಫುಲ್ ಸ್ಟಾಪ್ ಹಾಕುವಂತೆ ತಾರಕ್ ಚಿತ್ರವು ಮೂಡಿಬಂದಿದೆ.

ಆದರೆ ಹಲವು ನಿರೀಕ್ಷೆ ಇಟ್ಕೊಂಡು ಥಿಯೇಟರ್ ಗೆ ಬರುವ ಪ್ರೇಕ್ಷಕರಿಗೆ ಸ್ವಲ್ಪ ನಿರಾಸೆಯಾಗಬಹುದು. ಹಾಗಿದ್ದರೂ, ದರ್ಶನ್ ಅವರನ್ನ ಹೊಸ ರೀತಿಯಲ್ಲಿ ನೋಡ್ಬೇಕು ಎಂದುಕೊಂಡವರಿಗೆ ತಾರಕ್ ಚಿತ್ರವು ಮೊಸವೆನಿಸಲ್ಲ.

ನೈಜವೆನಿಸದ ಸಿನಿಮಾ ನೋಡಿ ನೋಡಿ ಸಾಕೆನಿಸಿರುವ ಪ್ರೇಕ್ಷಕರಿಗೆ ತಾರಕ್ ಒಂದು ಅದ್ಭುತವಾದ ರಸದೌತಣ. ಪ್ರೇಕ್ಷಕರು ದರ್ಶನ್ ರವರ ಹೊಸ ಪ್ರಯತ್ನವನ್ನು ಕಣ್ತುಂಬಿಕೊಂಡು ತೃಪ್ತ ಮನಸ್ಸಿನಿಂದ ಚಿತ್ರ ಮಂದಿರದಿಂದ ಹೊರ ಬರುತ್ತಾರೆ.

0 comments:

Post a Comment