ಚಿತ್ರ ವಿಮರ್ಶೆ : ಅಯನ

by September 09, 2017 0 comments
ವಿಮರ್ಶಕ : ಸಾಗರ್ ಪಡಿವಾಳ್.

ರೇಟಿಂಗ್ : 3.5/5

ಇರುವುದೆಲ್ಲವ ಬಿಟ್ಟು ಇಲ್ಲದರ ಕಡೆಗೆ ಸಾಗುವುದೇ ಜೀವನ - "ಅಯನ".

ಇಂಜಿನಿಯರ್ ಎಂದಾಕ್ಷಣ ನಮ್ಮೆಲ್ಲರಿಗೆ ಮೂಡವ ಮೊಟ್ಟ ಮೊದಲು ಮೂಡುವ ಭಾವನೆ ಎಂದರೆ, ಕೈ ತುಂಬ ಸಂಬಳ, ವಿದೇಶಿ ಪ್ರವಾಸ, ಮೋಜು ಮಸ್ತಿ, ಇತ್ತ್ಯಾದಿ.

ಆದರೆ ಅವರಿಗೂ ಎಲ್ಲರಂತೆ ಆಸೆ, ಕನಸು, ಸುಖ, ದುಃಖ ಇರುತ್ತವೆ ಎಂಬುವುದನ್ನು "ಅಯನ" ಚಿತ್ರದಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ.

ಈ ಚಿತ್ರದಲ್ಲಿ ನಾಯಕನು ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದು, ಒಳ್ಳೆಯ ಕೆಲಸ ಮಾಡುತ್ತಿದ್ದರೂ, ಅದನ್ನು ಬಿಟ್ಟು ಹೊಸದೇನನ್ನೋ ಹುಡುಕುತ್ತಾ ಹೊದಾಗ ಎದುರಾಗುವ ಸಮಸ್ಯಗಳೇ ಚಿತ್ರದ ವನ್ ಲೈನ್ ಸ್ಟೋರಿ.

ನಾಯಕ (ದೀಪಕ್‌) ಹಾಗೂ ಆತನ ಸ್ನೇಹಿತರು ಒಟ್ಟಿಗೆ ಕೆಲಸ ಮಾಡುತ್ತಿರುತ್ತಾರೆ. ತದನಂತರ ಎಲ್ಲರೂ ಮದುವೆಯಾಗುತ್ತಾರೆ. ಹೀಗೆ ಜೀವನ ಸರಾಗವಾಗಿ ಸಾಗುತ್ತಿರ ಬೇಕಾದರೆ ನಾಯಕನು ಇದ್ದಕ್ಕಿದ್ದ ಹಾಗೆ ಕೆಲಸ ಬಿಟ್ಟು ಹೊಸ ಉದ್ಯೋಗವನ್ನು ಆರಂಭಿಸಲು ಮುಂದಾಗುತ್ತಾನೆ. ಅದರಲ್ಲಿ ಆತ ಯಶಸ್ವಿಯಾಗುತ್ತಾನೋ ಇಲ್ಲವೋ? ಇಂತಹ ಪರಿಸ್ಥಿತಿಯಲ್ಲಿ ಆತನ ಆತ್ಮೀಯ ಪತ್ನಿ ಮತ್ತು ಗೆಳೆಯರು ಹೇಗೆ ಸ್ಪಂದಿಸುತ್ತಾರೆ ಎಂಬುದೇ ಸಿನಿಮಾದ ಕಥೆ.


ಚಿತ್ರದ ಮೊದಲಾರ್ಧವು ನಿಧಾನಗತಿಯಲ್ಲಿ ಸಾಗಿದ್ದು, ನಾಯಕ ಮತ್ತು ಗೆಳೆಯರ ಮದುವೆ, ಲವ್‌, ಮೋಜು ಮಸ್ತಿಯಿಂದ ಕೂಡಿದೆ. ಕಥೆಯು ತಾಜಾವಾಗಿದೆ, ಆದರೆ ದುರಾದೃಷ್ಟವಶಾತ್ ಈ ಚಲನಚಿತ್ರವು ಅದರ ಚಿತ್ರಕಥೆಯಲ್ಲಿ ವಿಫಲಗೊಳ್ಳುತ್ತದೆ. ಸೃಜನಶೀಲ ಕಥಾಹಂದರಕ್ಕೆ ವ್ಯಾಪ್ತಿ ಇದ್ದಾಗಲೂ ಮೊದಲಾರ್ಧದಲ್ಲಿ ಮಂದಗತಿ ಇದೆ, ಆದರೆ ದ್ವಿತೀಯಾರ್ಧದಲ್ಲಿ ನಿರೂಪಣೆಗೆ ಹೆಚ್ಚಿನ ತೂಕವಿದೆ.

ಉಳಿದಂತೆ ಸಿನಿಮಾ ನಿರ್ಮಾಣದ ಎಲ್ಲ ಹಂತಗಳಲ್ಲಿಯೂ ಟೆಕ್ಕಿಗಳೇ ತೊಡಗಿಸಿಕೊಂಡಿರುವ ಕಾರಣ, ಚಿತ್ರದ ಗುಣಮಟ್ಟ ಅದ್ಭುತವಾಗಿದೆ. ಕ್ಯಾಮರ ಕೆಲಸ, ಶ್ರೀಯಾಂಕ್‌ ಶ್ರೀಯಾನ್‌ ಸಂಗೀತ, ಚಿತ್ರೀಕರಣ ಮಾಡಿರುವ ಜಾಗ ಎಲ್ಲವೂ ಕಣ್ಣಿಗೆ ಇಂಪು ಕೊಡುವಂತಿದೆ. ಗಂಗಾಧರ್ ದೊಡ್ಡ ಪ್ರೇಕ್ಷಕರನ್ನು ಸಂಪರ್ಕಿಸಲು ವಿಫಲವಾದರೂ, ಅವರ ಚಲನಚಿತ್ರ 'ಕಾಸ್ಮೋಪಾಲಿಟನ್ ಬೆಂಗಳೂರಿಗೆ' ಸೀಮಿತಗೊಳಿಸುತ್ತದೆ. ಅಯನ ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್ನೊಂದಿಗೆ ಕಂಗ್ಲಿಷ್ ಚಲನಚಿತ್ರವಾಗಿದೆ. ಅಲ್ಲದೆ, ಚಿತ್ರದ ಪ್ರೊಡಕ್ಷನ್ ವಾಲ್ಯೂ ಉತ್ತಮವಾಗಿದೆ.

ಚಿತ್ರದಲ್ಲಿನ ಯುವ ಕಲಾವಿದರಲ್ಲಿ ಹೆಚ್ಚಿನವರು ರಂಗಮಂದಿರದಿಂದ ಬಂದಿದ್ದಾರೆ ಮತ್ತು ಅವರು ನಿಜವಾಗಿಯೂ ತಮ್ಮ ಅತ್ಯುತ್ತಮ ಕೆಲಸವನ್ನು ಮಾಡಿದ್ದಾರೆ. ಆದರೂ ಎಲ್ಲೋ ಒಂದು ಕಡೆ ಆ ಕಲಾವಿದರು ನಟನೆಯಲ್ಲಿ ಗೊಂದಲಕ್ಕಿಡಾಗಿದ್ದಾರೆ ಅಂಥ ಅನಿಸುವುದು ಅಷ್ಟೇ ಸತ್ಯ.

ಏರಿಯಲ್ ವೀಕ್ಷಣೆಗಳು ಛಾಯಾಗ್ರಾಹಕನ ನೆಚ್ಚಿನ ಶಾಟ್ ಆಗಿ ಮಾರ್ಪಟ್ಟಿವೆ, ಮತ್ತು ಆಗಾಗ್ಗೆ ಬಳಸಲಾಗಿದೆ. ಚಿತ್ರದ ಸಂಗೀತವು ಅದ್ಭುತ, ಆದರೆ ಹಲವಾರು ಹಾಡುಗಳಿವೆ. ಚಿತ್ರ ವೀಕ್ಷಿಸುವ ಪ್ರತಿಯೊಬ್ಬ ಪ್ರೇಕ್ಷಕನಿಗೂ, ಚಿತ್ರದ ನಿರೂಪಣಾ ಶೈಲಿ ಖಂಡಿತಾ ಹೊಸದೆನಿಸುತ್ತದೆ. ಈ ಕ್ರೆಡಿಟ್ ಚಿತ್ರದ ನಿರ್ದೇಶಕನಿಗೆ ಸಲ್ಲುತ್ತದೆ ಮತ್ತು ತನ್ನ ಮೊದಲ ಪ್ರಾಮಾಣಿಕ ಪ್ರಯತ್ನದಲ್ಲಿ ಅವರು ಗೆದ್ದಿದ್ದಾರೆ.

ಕೊನೆಯದಾಗಿ, "ಅಯನ" ಜನಸಾಮಾನ್ಯರಿಗೆ ಅಷ್ಟಾಗಿ ಹಿಡಿಸದೇ ಇರಬಹುದು, ಆದರೆ ಟೆಕ್ಕಿಗಳಿಗೆ ತುಂಬಾ ಇಷ್ಟ ಅಗೋದ್ರಲ್ಲಿ ಎರಡು ಮಾತಿಲ್ಲ.


0 comments:

Post a Comment