ಜನರೇ ಸ್ವತಃ ಆಯ್ಕೆ ಮಾಡಿದ ನಂಬರ್ ೧ ನಾಯಕ ನಟ ಯಾರು? ಅದು ಬೇರೆ ಯಾರೂ ಅಲ್ಲ, ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಹೌದು, ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆ ಓದುಗರು ಪುನೀತ್ ಅವರನ್ನು ವರ್ಷದ ನಾಯಕ ನಟ ಎಂದು ಆಯ್ಕೆ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಪುನೀತ್ ಅವರ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿಯೇ ಸರಿ!

Read more at Troll Haida - Click Here
ಕಿರಿಕ್ ಪಾರ್ಟಿ ಚಿತ್ರದಲ್ಲಿ ಅಲೆಕ್ಸಾಂಡರ್ ಎಂಬ ಪಾತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಚಂದನ್ ಆಚಾರ್ ಇದೀಗ ನಾಯಕ ನಟನಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆಯುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಬಾಬು ನಿರ್ದೇಶಿಸುತ್ತಿದ್ದು, ಮಾರ್ಚ್ ನಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಅಂದೇ ಚಿತ್ರದ ಶೀರ್ಷಿಕೆ ಕೂಡ ಘೋಷಣೆಯಾಗಲಿದೆ. ಅಂದಹಾಗೆ, ಬೆಂಗಳೂರು ಡೇಸ್ ಮತ್ತು ರಾಜ ರಾಣಿ ಖ್ಯಾತಿಯ ಮಲಯಾಳಂ ನಟಿ ನಜ್ರಿಯಾ ನಾಜಿಮ್ ಅವರನ್ನು ಹಿರೋಯಿನ್ ಆಗಿ ತರುವ ಯೋಜನೆಯಲ್ಲಿದೆ ಚಿತ್ರತಂಡ. ಕಳೆದ ಆರು ತಿಂಗಳಿಂದ ಚಿತ್ರ ನಿರ್ಮಾಪಕರು ಮತ್ತು ನಟಿ ಮಧ್ಯೆ ಮಾತುಕತೆ ನಡೆಯುತ್ತಿದೆ. ಇನ್ನು ನಜ್ರಿಯಾ ಅವರಿಂದ ಅಂತಿಮ ಒಪ್ಪಿಗೆ ಸಿಗುವುದೊಂದೇ ಬಾಕಿ.

Read more at Just Kannada - Click Here
ಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಮತ್ತು ಗಜಕೇಸರಿ ಕೃಷ್ಣ "ಪೈಲ್ವಾನ್" ಚಿತ್ರದ ಮೂಲಕ ಒಂದಾಗುತ್ತಿರುವ ವಿಷಯ ನಿಮಗೆ ತಿಳಿದಿರಬಹುದು. ಅಂದಹಾಗೆ, ಈ ಚಿತ್ರದ ಲೇಟೆಸ್ಟ್ ಅಪ್ಡೇಟ್ ಏನಪ್ಪಾ ಅಂದ್ರೆ ಸುದೀಪ್ ಪೈಲ್ವಾನ್ ಸಿನಿಮಾದ ಪಾತ್ರಕ್ಕಾಗಿ ವರ್ಕ್ ಔಟ್ ಶುರು ಮಾಡಿದ್ದಾರೆ. ಪೈಲ್ವಾನ್ ಹೆಸರಿಗೆ ತಕ್ಕಂತೆ ಬಾಡಿ ಬಿಲ್ಡ್ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿ ಪ್ರತಿ ನಿತ್ಯ ದೇಹವನ್ನ ದಂಡಿಸುತ್ತಿದ್ದಾರೆ ಕಿಚ್ಚ!

Read more at Public TV - Click Here

ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದ ದಿವಾಕರ್, ಇದೀಗ ದೊಡ್ಡ ಸೆಲೆಬ್ರಿಟಿ ಆಗಿರೋದು ಹಳೆಯ ವಿಚಾರ. ಆದ್ರೆ ಈಗ ಹೊಸ ವಿಷಯ ಏನಪ್ಪಾ ಅಂದ್ರೆ, ಕಿಚ್ಚ ಸುದೀಪ್ ಅಭಿನಯದ ಮುಂದಿನ ಚಿತ್ರ "ಪೈಲ್ವಾನ್", ಈ ಚಿತ್ರದಲ್ಲಿ ದಿವಾಕರ್ ಕೂಡ ಒಂದು  ಲೀಡ್ ರೋಲ್ ನಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಚಿತ್ರಕ್ಕೆ ಗಜಕೇಸರಿ ಹಾಗೂ ಹೆಬ್ಬುಲಿ ಚಿತ್ರದ ನಿರ್ದೇಶಕ ಕೃಷ್ಣ ಅವರ ನಿರ್ಮಾಣ ಹಾಗೂ ನಿರ್ದೇಶನವಿದೆ.

Read more at Troll Haida - Click Hereಈ ಹಿಂದೆ ರಣವಿಕ್ರಮ ಎಂಬ ಇಂಡಸ್ಟ್ರಿ ಹಿಟ್ ಚಿತ್ರ ನೀಡಿದ ಜೋಡಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ - ಪವನ್ ಒಡೆಯರ್ ಜೋಡಿ ಮತ್ತೇ ಒಂದಾಗಲಿದ್ದಾರೆ. ಆದರೆ ಈ ಬಾರಿ ಪುನೀತ್ ಅವರಿಗೆ ಪವನ್ ಹಾರರ್ ಕಥೆ ಸಿದ್ದ ಪಡೆಸಿದ್ದಾರೆ ಎಂದು ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ. ಇದುವರೆಗೆ ಫ್ಯಾಮಿಲಿ ಎಂಟರ್ ಟೈನರ್ ಆ್ಯಕ್ಷನ್ ಚಿತ್ರ ಮಾಡಿದ ಪುನೀತ್ ಇದೀಗ ಮೊದಲ ಬಾರಿಗೆ ಹಾರರ್ ಚಿತ್ರ ಮಾಡೋ ಸುದ್ದಿ ಇದೆ.

Read more at Troll Haida - Click Hereವರನಟ ಡಾ. ರಾಜ್ ಕುಮಾರ್ ಕುಟುಂಬದಿಂದ ಮತ್ತೋರ್ವ ನಾಯಕ ನಟ,ಧೀರೇನ್ ರಾಮ್ ಕುಮಾರ್ ಚಿತ್ರರಂಗಕ್ಕೆ ಕಾಳಿಡುತ್ತಿರುವ ವಿಚಾರ ಈಗಾಗಲೇ ನಿಮಗೆ ತಿಳಿದಿರಬಹುದು. ಸಾಕಷ್ಟು ನಿರ್ಮಾಪಕರುಗಳು ಧೀರೇನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ಆದರೆ, ಸದ್ಯ ಕೇಳಿಬರುತ್ತಿರುವ ಮಾತುಗಳ ಪ್ರಕಾರ, ನಿರ್ಮಾಪಕ ಜಯಣ್ಣ ಧೀರೇನ್ ಸಿನಿಮಾ ನಿರ್ಮಾಣ ಮಾಡವ ಸಾಧ್ಯತೆಗಳಿವೆ ಅಂತೆ. ಒಳ್ಳೆ ಕಥೆ ಹಾಗೂ ನಿರ್ದೇಶಕರಿಗಾಗಿ ಹುಡುಕಾಟ ಶುರುವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಧೀರೇನ್. ಅಂದಹಾಗೆ, ಧೀರೇನ್ ಅವರ ಹೊಸ ಫೋಟೋಶೂಟ್ ಚಿತ್ರಗಳು ವೈರಲ್ ಆಗಿದ್ದು, ನೋಡಿದ ಹಲವರು ಕನ್ನಡ ಚಿತ್ರರಂಗದ ರಣವೀರ್ ಸಿಂಗ್ ಎನ್ನುತ್ತಿದ್ದಾರೆ.

Read more at Filmibeat Kannada - Click Hereತಮ್ಮ ಮೊದಲ ತೆಲುಗು ಚಿತ್ರ 'ಚಲೋ', ಇದರಲ್ಲಿ ತೆಲುಗು ಪ್ರೇಕ್ಷಕರನ್ನು ಮೋಡಿ ಮಾಡಿದ ನಮ್ಮ ರಶ್ಮಿಕಾ ಅವರಿಗೆ ಇದೀಗ ಟಾಲಿವುಡ್ ನಲ್ಲಿ ಎಲ್ಲಿಲ್ಲದ ಬೇಡಿಕೆ. ಸದ್ಯ ವಿಜಯ್ ದೇವರಕೊಂಡ ಜೊತೆ ತೆಲುಗು ಚಿತ್ರವೊಂದರಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಅವರಿಗೆ, ಮತ್ತದೇ ವಿಜಯ್ ಜೊತೆ ನಟಿಸುವ ಅವಕಾಶ ಬಂದಿದೆ ಎನ್ನುತ್ತಿವೆ ಮೂಲಗಳು. ಪಕ್ಕಾ ಆಕ್ಷನ್ ಕಮ್ ರೊಮ್ಯಾಂಟಿಕ್ ಡ್ರಾಮಾ ರೀತಿಯ ಚಿತ್ರವನ್ನು ಭರತ್ ಕಮ್ಮಾ ನಿರ್ದೇಶಿಸಲಿದ್ದಾರಂತೆ. ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ನಿರ್ವಣದ ಜವಾಬ್ದಾರಿ ಹೊತ್ತಿದ್ದು, ಅಧಿಕೃತವಾಗಿ ಶೀರ್ಷಿಕೆ ಸಮೇತ ಶೀಘ್ರದಲ್ಲಿ ತಂಡವನ್ನು ಪರಿಚಯಿಸಲಿದ್ದಾರಂತೆ ನಿರ್ದೇಶಕರು.

Read more at VijayaVani - Click Here
ಕನ್ನಡ ಸಿನಿಮಾರಂಗದ ಎಲ್ಲಾ ಕಲಾವಿದರು ಒಟ್ಟಿಗೆ ಸೇರಿ, ಕನ್ನಡ ಚಿತ್ರರಂಗದ ಹಿರಿಯ ಕಲಾವಿದರ ಕನಸನ್ನು ನನಸು ಮಾಡಿದ್ದಾರೆ. ಹೌದು, ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಕಲಾವಿದರ ಸಂಘದ ನೂತನ ಕಟ್ಟಡ ನಿನ್ನೆಯಷ್ಟೇ ಉದ್ಘಾಟನೆ ಆಗಿದೆ. ಹೊಸ ಕಟ್ಟಡದ ಹಿಂದೆ ಹಲವಾರು ಜನರ ಶ್ರಮವಿದೆ. ಈ ಶ್ರಮವನ್ನು ಗುರುತಿಸಿ, ಕಿಚ್ಚ ಸುದೀಪ್ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ - "ಅಂಬರೀಶ್ ಅವರಿಂದ ಈ ಕೆಲಸ ಮಾಡಲು ಸಾಧ್ಯವಾಯಿತು. ಹಾಗೂ ಅವರ ಜೊತೆಯಲ್ಲಿ ಸಾಕಷ್ಟು ಜನರು ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಮುಖ್ಯವಾಗಿ ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ, ಇದೊಂದು ಸಾಧಾರಣವಾದ ಫೋಟೋ ರೀತಿಯಲ್ಲಿ ಕಾಣುತ್ತಿದೆ. ಆದರೆ ಇದರ ಹಿಂದಿನ ಯಶಸ್ಸು ತುಂಬಾ ಇದೆ."

Read more at Filmibeat Kannada - Click Hereರಾಕಿಂಗ್ ಸ್ಟಾರ್ ಯಶ್ ಅಭಿನಯದ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ "ಕೆಜಿಎಫ್" ಚಿತ್ರದ ಟೀಸರ್ ಯಶ್ ಅವರ ಹುಟ್ಟುಹಬ್ಬದ ದಿನದಂದು ರಿಲೀಸ್ ಆಗಿ, ದಾಖಲೆ ನಿರ್ಮಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಟೀಸರ್ ನಲ್ಲಿ ಚಿತ್ರದ ಟ್ರೈಲರ್ ಫೆಬ್ರವರಿಯಲ್ಲಿ ಬಿಡುಗಡೆ ಎಂದು ಘೋಷಿಸಿದ್ದ ಚಿತ್ರತಂಡ, ಆ ನಂತರ ಅದರ ಕುರಿತು ಎಲ್ಲೂ ಮಾತನಾಡಿಲ್ಲ. ಆದರೆ, ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ, ಫೆಬ್ರವರಿ ೨೫ರಂದು ಕೆಜಿಎಫ್ ಟ್ರೈಲರ್ ಬಿಡುಗಯಾಗುತ್ತಿದೆ. ಅಂದಹಾಗೆ, ಇದು ಗಾಳಿ ಸುದ್ದಿಯಾಗಿದ್ದು, ಎಲ್ಲೂ ಅಧಿಕೃತವಾಗಿ ಚಿತ್ರತಂಡ ಘೋಷಿಸಿಲ್ಲ!

Read more at Troll Haida - Click Here'ಕಿಕ್' ರಿಯಾಲಿಟಿ ಶೋ ನಂತರ ಶಿವರಾಜಕುಮಾರ್‌ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. ಆದ್ರೆ ಈ ಬಾರಿ ಒಂದು ಟಾಕ್ ಶೋ ಮೂಲಕ ಮತ್ತೆ ನಿಮ್ಮ ಟೀವಿ ಸ್ಕ್ರೀನ್ಗಳಲ್ಲಿ ಶಿವಣ್ಣ ರಾರಾಜಿಸಲಿದ್ದಾರೆ. ತೆಲುಗಿನಲ್ಲಿ ನಟ ರಾನಾ ದಗ್ಗುಬಾಟಿ ನಡೆಸಿಕೊಡುತ್ತಿರುವ 'ನಂ. 1 ಯಾರಿ ರಾನಾ' ಕಾರ್ಯಕ್ರಮ, ಇದೀಗ ಕನ್ನಡದಲ್ಲಿ 'ಯಾರಿ ನಂ. 1 ಶಿವಣ್ಣ' ಎಂಬ ಹೆಸರಿನೊಂದಿಗೆ, ಶಿವಣ್ಣ ಅವರ ಉಪಸ್ಥಿತಿಯಲ್ಲಿ ಸದ್ಯದಲ್ಲೇ ಸ್ಟಾರ್ ಸುವರ್ಣದಲ್ಲಿ ಅದ್ಧೂರಿಯಾಗಿ ಪ್ರಸಾರವಾಗಲಿದೆ.

Read more at EeNadu India - Click Here